ಪ್ರಿನ್ಸ್ ನರೂಲಾರವರು (ಜನನ ː೨೪ ನವೆಂಬರ್ ೧೯೯೦) ಭಾರತೀಯ ಮಾಡೆಲ್ ಮತ್ತು ನಟ . ಇವರು ರೋಡೀಸ್ ಎಕ್ಸ್ ೨ , ಸ್ಪ್ಲಿಟ್ಸ್ವಿಲ್ಲಾ ೮ , ಬಿಗ್ ಬಾಸ್ ೯ ಮತ್ತು ನಚ್ ಬಲಿಯೆ ೯ ರಲ್ಲಿ ಭಾಗವಹಿಸಿ ಗೆದ್ದಿದ್ದಾರೆ. == ಆರಂಭಿಕ ಜೀವನ == ನರೂಲಾ ರವರು ಭಾರತದ ಚಂಡೀಗಡ ಮೂಲದವರು. ಇವರು ಎಂಟಿವಿ ರೋಡೀಸ್ ಎಕ್ಸ್ ೨ ನಲ್ಲಿ ಭಾಗವಹಿಸುವ ಮೊದಲು ಹಲವಾರು ವರ್ಷಗಳ ಕಾಲ ಮಾಡೆಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು . == ವೈಯಕ್ತಿಕ ಜೀವನ == ಬಿಗ್ ಬಾಸ್ ೯ ರಲ್ಲಿ ನರೂಲಾ ರವರು ಯುವಿಕಾ ಚೌದ್ರಿಯವರನ್ನು ಭೇಟಿಯಾದರು. ಇವರಿಬ್ಬರು ೧೨ ಅಕ್ಟೋಬರ್ ೨೦೧೮ ರಂದು ಮುಂಬೈನಲ್ಲಿ ವಿವಾಹವಾದರು. == ವೃತ್ತಿ == ಪಿಟಿಸಿ ಪಂಜಾಬಿ ಎಂಬ ಚಾನೆಲ್‌ ನಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಪಂಜಾಬ್‌‌ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ನರೂಲಾ ರವರು ೨೦೧೪ ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು , ಅಲ್ಲಿ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು . ೨೦೧೫ ರಲ್ಲಿ , ಅವರು ಎಂಟಿವಿ ಇಂಡಿಯಾದ ರೋಡೀಸ್ ಎಕ್ಸ್ ೨ ನಲ್ಲಿ ಭಾಗವಹಿಸಿದರು , ಅಲ್ಲಿಯೂ ಅವರು ವಿಜೇತರಾಗಿ ಹೊರಹೊಮ್ಮಿದರು . ಮುಂದೆ , ಅವರು ಸ್ಪ್ಲಿಟ್ಸ್ವಿಲ್ಲಾ ೮ ರಲ್ಲಿ ಭಾಗವಹಿಸಿದರು , ಅಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಯಿತು . ಅಕ್ಟೋಬರ್ ೨೦೧೫ ರಲ್ಲಿ , ನರೂಲಾ ರವರು ಕಲರ್ಸ್ ಟಿವಿಯ ಬಿಗ್ ಬಾಸ್ ೯ ರಲ್ಲಿ ಭಾಗವಹಿಸಿ ಮತ್ತೆ ವಿಜೇತರಾಗಿ ಹೊರಹೊಮ್ಮಿದರು . ೨೦೧೬ ರಿಂದ ೨೦೧೮ ರವರೆಗೆ ಅವರು ಲಖನ್ "ಲಕ್ಕಿ" ಸಿಂಗ್ ಅಹ್ಲಾವತ್ ಎಂಬ ಪಾತ್ರವನ್ನು ವಹಿಸಿ &ಟಿವಿಯ ಬಡೋ ಬಹು ಎಂಬ ಧಾರವಾಹಿಯಲ್ಲಿ ನಟಿಸಿದರು . ೨೦೧೬ ರಿಂದ , ನರೂಲಾ ರವರು ಎಂಟಿವಿಯ ರೋಡೀಸ್‌ನಲ್ಲಿ ಗ್ಯಾಂಗ್ ಲೀಡರ್ ಆಗಿದ್ದಾರೆ. ೨೦೧೮ ರಲ್ಲಿ , ಇವರು ಲಾಲ್ ಇಷ್ಕ್ ಎಂಬ ಧಾರವಾಹಿಯಲ್ಲಿ ಆರ್ಯನ್ ಎಂಬ ಪಾತ್ರದಲ್ಲಿ ಅಭಿನಯಿಸಿದರು . ನಂತರ , ಇವರು ಕಲರ್ಸ್ ಟಿವಿಯ ನಾಗಿನ್ ೩ ರಲ್ಲಿ ಶಹನವಾಜ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ . == ಫಿಲ್ಮೋಗ್ರಾಫಿ == === ದೂರದರ್ಶನ === === ವೆಬ್ === === ವಿಶೇಷ ಪಾತ್ರ === == ಡಿಸ್ಕೋಗ್ರಾಫಿ == === ಸಿಂಗಲ್ಸ್ === === ವೈಶಿಷ್ಟ್ಯಗಳು === == ಗ್ಯಾಲರಿ == == ಉಲ್ಲೇಖಗಳು ==